ಮಿತ್ರರಾದ ಮಾಜಿ ಕಾರ್ಪೊರೇಟರ್ ಶ್ರೀ ಟಿ.ಎಚ್.ಬಾಲಕೃಷ್ಣರವರು ಮತ್ತು ಹೋಟೆಲ್ ಉಡ್ ಲ್ಯಾಂಡ್ಸ್ ಮಾಲೀಕರಾದ ಶ್ರೀ ಗುರು ಬಳ್ಳಕುರಾಯರವರು ವಿಶ್ವಾಸವಿಟ್ಟು ಆಹ್ವಾನಿಸಿದಾಗ, ಒಪ್ಪಲೇಬೇಕಾಯಿತು. ಶ್ರೀರಾಮನಗರವು ನಮ್ಮ ತುಮಕೂರಿನ ಹಳೆಯ ಬಡಾವಣೆಗಳಲ್ಲೊಂದು. ಇಲ್ಲಿನ ಶ್ರೀರಾಮ ಕನ್ನಡ ಯುವಕ ಸಂಘವು ಶ್ರೀ ಬಾಲಕೃಷ್ಣರವರ ನೇತೃತ್ವದಲ್ಲಿ ದಿನಾಂಕ 01-12-2018, ಶನಿವಾರ ರಾತ್ರಿ ಆಚರಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾದೆ. ಕರಾಟೆ ಪಟು ಶ್ರೀ ಶರತ್, ಸ್ಥಳೀಯ ಕಾರ್ಪೊರೇಟರ್ ಮಹೇಶ್ ಕುಮಾರ್ ಅವರ ಜೊತೆಗೆ ನನ್ನನ್ನೂ ಪ್ರೀತಿಯಿಂದ ಗೌರವಿಸಿದರು. ಶ್ರೀ ಬಾಲಕೃಷ್ಣ, ಶ್ರೀ ಗುರು ಬಳ್ಳಕುರಾಯ, ಶ್ರೀ ರವೀಂದ್ರ ಕುಮಾರ್ ಮತ್ತಿತರ ಮಿತ್ರರೆಲ್ಲರಿಗೂ ಕೃತಜ್ಞತೆಗಳು..
No comments:
Post a Comment