* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday 15 December 2018

ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾರವರೊಡನೆ with Vidvan Anuru Ananthakrishna Sharma

ಲಯ ಲಾವಣ್ಯ ತಾಳವಾದ್ಯ
You Tube: https://youtu.be/idf0my7QedQ
---------------------------
ಸುಮಾರು ಒಂದೂವರೆ ಗಂಟೆಗಳ ಕಾಲ ಅಲ್ಲೊಂದು ಅಲೌಕಿಕ ವಾತಾವರಣವೇ ಸೃಷ್ಟಿಯಾಗಿತ್ತು. ಹನ್ನೊಂದು ಕಲಾವಿದರ ಅಸಾಧಾರಣ ಪ್ರತಿಭೆಯಿಂದ ತಾಳ ವಾದ್ಯಗಳಿಂದ ಹೊಮ್ಮುತ್ತಿದ್ದ ಲಯ ಲಾವಣ್ಯದಲ್ಲಿ ಎಲ್ಲರ ಮನ ತಲ್ಲೀನವಾಗಿಹೋಗಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸುವಿಖ್ಯಾತ ವಿದ್ವಾಂಸರಾದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಅವರ ನೇತೃತ್ವದಲ್ಲಿ ಇಂದು (15-12-2018, ಶನಿವಾರ) ಸಂಜೆ ಗುಬ್ಬಿ ಪಟ್ಟಣದಲ್ಲಿರುವ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ "ತಾಳ ವಾದ್ಯ ಲಯ ಲಾವಣ್ಯ" ಕಾರ್ಯಕ್ರಮ ಶ್ರೋತೃಗಳಿಗೆ ಇಂತಹುದೊಂದು ವಿಶಿಷ್ಟಾನುಭವ ತಂದುಕೊಟ್ಟಿತು. ಅವರನ್ನು ನೋಡುವ, ಅವರೊಡನೆ ಮಾತನಾಡುವ, ಅವರ ಕಾರ್ಯಕ್ರಮ ಆಸ್ವಾದಿಸುವ ಸುಯೋಗ ಇಂದು ನಮಗೆ (ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ -ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್) ಲಭಿಸಿತು.
ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಅವರು ಅಷ್ಟೊಂದು ಪ್ರಖ್ಯಾತ ವಿದ್ವಾಂಸರಾಗಿದ್ದರೂ, ನಮ್ಮ ತಂದೆಯವರ ಪರಿಚಯ ಆದೊಡನೆ ಎದ್ದುನಿಂತು ಅವರ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿದ್ದು "ವಿದ್ಯಾ ದದಾತಿ ವಿನಯಂ" ಎಂಬುದನ್ನು ಅನಾವರಣಗೊಳಿಸಿತು. ಅದೇ ರೀತಿ ಅವರೊಂದಿಗಿನ ಮಾತುಕತೆ ನಮ್ಮೆಲ್ಲರಿಗೂ ಆಹ್ಲಾದವನ್ನುಂಟುಮಾಡಿತು.
ಗುಬ್ಬಿವೀರಣ್ಣ ಟ್ರಸ್ಟ್ ವತಿಯಿಂದ ಖ್ಯಾತ ಕಲಾವಿದೆ ಶ್ರೀಮತಿ ಜಯಶ್ರೀರವರು ಮೂರು ದಿನಗಳ ವಿಶೇಷ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದ್ದು, ಮೊದಲನೇ ದಿನವಾದ ಇಂದು "ತಾಳ ವಾದ್ಯ ಲಯ ಲಾವಣ್ಯ" ಕಾರ್ಯಕ್ರಮ ಸೊಗಸಾಗಿ ನೆರವೇರಿತು.







No comments:

Post a Comment