ಖ್ಯಾತ ಪತ್ರಕರ್ತರಾದ ಶ್ರೀ ಪಿ.ಸಾಯಿನಾಥ್ ಅವರೊಡನೆ...
---------------------------------------
ರಾಷ್ಟ್ರದ ಹೆಸರಾಂತ ಪತ್ರಕರ್ತರಾದ ಹಾಗೂ ರಾಷ್ಟ್ರಾದ್ಯಂತ ಗಮನಸೆಳೆದ "Everybody Loves Draught" ಕೃತಿಯ ಕರ್ತೃ ಶ್ರೀ ಪಿ.ಸಾಯಿನಾಥ್ ಅವರನ್ನು ನೋಡುವ ಹಾಗೂ ಅವರ ಚಿಂತನಾರ್ಹ ಹಾಗೂ ಪ್ರಖರವಾದ ಮಾತುಗಳನ್ನು ಆಲಿಸುವ ಸುಸಂದರ್ಭ ಇಂದು (08-12-2018, ಶನಿವಾರ) ನನಗೆ ತುಮಕೂರಿನಲ್ಲೇ ಒದಗಿಬಂತು. ಈ ಮೂಲಕ ಬಹುಕಾಲದ ಆಶಯವೊಂದು ಈಡೇರಿದಂತಾಯಿತು. ಅಂದಹಾಗೆ ಇವರು ಭಾರತದ ಮಾಜಿ ರಾಷ್ಟ್ರಪತಿ ದಿ.ಶ್ರೀ ವಿ.ವಿ.ಗಿರಿ ಅವರ ಮೊಮ್ಮಗ.
ಬಂಡಾಯ ಸಾಹಿತ್ಯ ಸಂಘಟನೆಯಿಂದ ತುಮಕೂರಿನಲ್ಲಿ "ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ" ಕುರಿತ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಲು ಅವರು ಆಗಮಿಸಿದ್ದರು. ಅವರೊಡನೆ ನಾನೂ ಇರುವ ಒಂದು ಚಿತ್ರ ಇಲ್ಲಿದೆ. ಖ್ಯಾತ ಸಾಹಿತಿಗಳೂ ಆತ್ಮೀಯರೂ ಆದ ಶ್ರೀ ಬರಗೂರು ರಾಮಚಂದ್ರಪ್ಪರವರು, ಪತ್ರಕರ್ತ ಮಿತ್ರರಾದ ಶ್ರೀ ಇಂದ್ರಕುಮಾರ್ ಮತ್ತು ಶ್ರೀ ಮಹೇಂದ್ರ ಅವರೂ ಇದ್ದಾರೆ.
ಇದಕ್ಕೂ ಮೊದಲು ಸಮಾರಂಭ ಸ್ಥಳಕ್ಕೆ ನಾನು ತೆರಳಿದೊಡನೆ ಎದುರಾದವರು ಶ್ರೀ ಬರಗೂರು ರಾಮಚಂದ್ರಪ್ಪನವರು. ಎಂದಿನಂತೆ ಅವರು ಕೇಳಿದ ಮೊದಲ ಪ್ರಶ್ನೆಯೇ- "ನೀವು ಇತ್ತೀಚೆಗೆ ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಏಕೆ ಬರೆಯುತ್ತಿಲ್ಲ?". ನಾನು ಮುಗುಳ್ನಕ್ಕೆ. ಹಾಗೆಯೆ ಕೆಲ ಹೊತ್ತು ಅವರೊಡನೆ ಮಾತನಾಡುವ ಸುಸಂದರ್ಭ ನನಗೆ ಲಭಿಸಿತು

R S Iyer with Sri P Sainath, Noted Journalist
No comments:
Post a Comment