ನಮ್ಮ ತುಮಕೂರಿನ ಚಿಕ್ಕಪೇಟೆ ಎಂದರೆ ನಮಗೆ ಒಂದು ರೀತಿ ಭಾವನಾತ್ಮಕ ಸಂಬಂಧ. ಚಿಕ್ಕಪೇಟೆ-ಮಂಡಿಪೇಟೆ ರಸ್ತೆಯಲ್ಲಿ ಶ್ರೀ ಶಿವಸೈನ್ಯ ಕನ್ನಡ ಯುವಕರ ಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲೂ ದಿ.30-11-2018, ಶುಕ್ರವಾರ ಸಂಜೆ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದರು. ಗೆಳೆಯ ಮಾಜಿ ಕಾರ್ಪೊರೇಟರ್ ಶ್ರೀ ಟಿ.ವಿ. ಚಂದ್ರಶೇಖರ್ (ಪಾತ್ರೆ ಚಂದ್ರು) ಅವರ ನಾಯಕತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ನನ್ನ ಜೊತೆಗೆ ಶ್ರೀ ಕಿರಣ್ ಕುಮಾರ್ ಅವರನ್ನೂ ಸನ್ಮಾನಿಸಲಾಯಿತು. ಮಾಜಿ ಮೇಯರ್ ಶ್ರೀ ಸುಧೀಶ್ವರ್, ಕಾರ್ಪೊರೇಟರ್ ಗಳಾದ ಶ್ರೀ ಮಹೇಶ್ ಕುಮಾರ್, ಶ್ರೀಮತಿ ದೀಪಶ್ರೀ ಮಹೇಶ್, ಇತರ ಗಣ್ಯರಾದ ಶ್ರಿ ಮನೋಹರಗೌಡ, ಶ್ರೀ ಬಾವಿಕಟ್ಟೆ ನಾಗೇಶ್, ಶ್ರೀಮತಿ ಅನಸೂಯ ರತ್ನಯ್ಯಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಎಲ್ಲ ಸನ್ಮಿತ್ರರಿಗೂ ಕೃತಜ್ಞನಾಗಿದ್ದೇನೆ.
No comments:
Post a Comment