* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday, 3 December 2018

ಸನ್ಮಾನ...Felicitation to R S Iyer by M.L.T.A., Tumakuru

ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳಿಂದ ಸನ್ಮಾನಿತರಾದ ತುಮಕೂರು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯರವರು, ಸಹಕಾರ ಕ್ಷೇತ್ರದಲ್ಲಿನ ಸಾಧನೆಗಾಗಿ ಪುರಸ್ಕೃತರಾಗಿರುವ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ ರವರು ಮತ್ತು ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾಗಿರುವ ಶ್ರೀಮತಿ ನುಜರತ್ ಉನ್ನೀಸಾ ರವರೊಂದಿಗೆ ನನ್ನನ್ನೂ ಗೌರವಿಸಿದವರು ತುಮಕೂರಿನ "ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ ಅಸೋಸಿಯೇಷನ್'' ಪದಾಧಿಕಾರಿಗಳು.
ದಿ.02-12-2018 ರಂದು ಭಾನುವಾರ ಸಂಜೆ ತುಮಕೂರಿನ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಸದರಿ ಸಂಘದ ಅಧ್ಯಕ್ಷರೂ, ಮಿತ್ರರೂ ಆದ ಶ್ರೀ ಬೆಳ್ಳಿ ಲೋಕೇಶ್ ರವರ ನೇತೃತ್ವದಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಸನ್ಮಾನವೂ ನಡೆಯಿತು. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು. ಸನ್ಮಾನಿತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅತಿಥಿಗಳಿಗೆ ಸನ್ಮಾನದ ಜೊತೆಗೆ "ಒಂದೊಂದು ಸಸಿ''ಯನ್ನು ನೀಡಿದ್ದು ವಿಶೇಷವಾಗಿತ್ತು ಮತ್ತು ಶ್ರೀ ಬೆಳ್ಳಿ ಲೋಕೇಶ್ ಅವರ ಸೃಜನಶೀಲ ಮನಸ್ಸಿಗೆ ಸಾಕ್ಷಿಯಾಗಿತ್ತು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ಎಸ್.ಜಿ. ಪರಮೇಶ್ವರಪ್ಪರವರು, ಸಂಘದ ಗೌರವ ಅಧ್ಯಕ್ಷರಾದ ಅಂಬ್ಲಿ ನಾಗರಾಜ್ ರವರು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೇರೆಯವರನ್ನು ಸನ್ಮಾನಿಸಿ, ಗೌರವಿಸಿ ತಾವು ಸಂತೋಷಪಟ್ಟ ಶ್ರೀ ಬೆಳ್ಳಿ ಲೋಕೇಶ್ ರವರು ಮತ್ತು ಅವರ ತಂಡದವರಿಗೆ ಕೃತಜ್ಞತೆಗಳು..








No comments:

Post a Comment