ಹಾಲಪ್ಪ ಫೌಂಡೇಷನ್ ವತಿಯಿಂದ ದಿನಾಂಕ 07-12-2018, ಶುಕ್ರವಾರ ತುಮಕೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ಮುರಳೀಧರ ಹಾಲಪ್ಪ ಅವರು ಈ ಬಾರಿಯ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತರಾದ ಶ್ರೀ ಮಿಡಿಗೇಶಿ ಭೂಷಣ್, ಶ್ರೀ ಬಂಡಿ ಚೌಡಯ್ಯ, ಶ್ರೀ ಹಫೀಜ್ ಮತ್ತು ಕುಮಾರಿ ಕುಸುಮಾ ಜೈನ್ ಅವರ ಜೊತೆಗೆ ನನ್ನನ್ನೂ ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ.ಸಿ. ವೇಣುಗೋಪಾಲ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶ್ರೀ ಮುಷ್ತಾಕ್ ಅಹಮದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಬಾ.ಹ.ರಮಾಕುಮಾರಿ, ತುಮಕೂರು ನಗರ ಡಿವೈಎಸ್ಪಿ ಶ್ರೀ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಮಕೃಷ್ಣ, ಮಾಜಿ ಜಿ.ಪಂ. ಸದಸ್ಯ ಶ್ರೀ ಶ್ರೀನಿವಾಸ ಮೂರ್ತಿ ಮೊದಲಾದ ಹಲವು ಮುಖಂಡರುಗಳು ಉಪಸ್ಥಿತರಿದ್ದರು. ಎಲ್ಲ ಮಿತ್ರರಿಗೂ ಕೃತಜ್ಞತೆಗಳು.
No comments:
Post a Comment