ತುಮಕೂರು ನಗರದ ಶ್ವಾಸಕೋಶದಂತಿರುವ ಅಮಾನಿಕೆರೆಯ ಪ್ರವೇಶದ್ವಾರದಲ್ಲಿ "ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ"ದ ಸನ್ಮಿತ್ರರು ಇಂದು (16-12-2018, ಭಾನುವಾರ) ಸಂಜೆ ನಡೆಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಹಲವು ಗಣ್ಯ ಸಾಧಕರ ಜೊತೆಗೆ ನನ್ನನ್ನೂ ಪ್ರೀತಿಯಿಂದ ಗೌರವಿಸಿದರು.
ಹಿರೇಮಠಾಧ್ಯಕ್ಷರಾದ ಪ.ಪೂ. ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು, ತುಮಕೂರು ನಗರದ ಶಾಸಕರೂ, ಮಿತ್ರರೂ ಆದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ತುಮಕೂರು ನಗರದ ಡಿವೈಎಸ್ಪಿರವರಾದ ಶ್ರೀ ನಾಗರಾಜ್ ರವರು, ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಎಲ್. ಮಂಜುನಾಥಸ್ವಾಮಿರವರು, "ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ"ದ ಅಧ್ಯಕ್ಷರೂ, ಮಿತ್ರರೂ ಆದ ಮಾಜಿ ಕಾರ್ಪೊರೇಟರ್ ಶ್ರೀ ಟಿ.ಎಚ್.ವಾಸುದೇವ್ ರವರು, ಬಳಗದ ಗೌರವಾಧ್ಯಕ್ಷರೂ ಮಿತ್ರರೂ ಆದ ಖ್ಯಾತ ಕರಾಟೆಪಟು ಶ್ರೀ ಕರಾಟೆ ಕೃಷ್ಣಮೂರ್ತಿರವರು ಹಾಗೂ ಹಲವು ಮಿತ್ರರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. ನಮ್ಮ ತಂದೆ ಸ್ವಾತಂತ್ರ್ಯಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರನ್ನೂ ಈ ಸಂದರ್ಭದಲ್ಲಿ ಆಯೋಜಕರು ವೇದಿಕೆಗೆ ಆಹ್ವಾನಿಸಿ ಸಂತಸ ಹಂಚಿಕೊಂಡರು. "ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ"ದ ಎಲ್ಲ ಸನ್ಮಿತ್ರರಿಗೂ ನಾನು ಆಭಾರಿಯಾಗಿದ್ದೇನೆ.

No comments:
Post a Comment