* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday, 29 November 2018

ರೋಟರಿಯಲ್ಲಿ ಸನ್ಮಾನ Felicitation at Rotary Club Tumkur Central - R S Iyer

ತುಮಕೂರಿನಲ್ಲಿ ರೋಟರಿ ಕ್ಲಬ್ ದಶಕಗಳಿಂದ ತನ್ನದೇ ಆದ ವಿಶಿಷ್ಟ ಸೇವಾ ಕಾರ್ಯಗಳಿಂದ ಗುರುತಿಸಲ್ಪಟ್ಟಿದೆ. ನಮ್ಮ ನಗರದ ವಿವಿಧ ಕ್ಷೇತ್ರಗಳ ಗಣ್ಯರುಗಳು ರೋಟರಿ ಕ್ಲಬ್ ನಲ್ಲಿ ಸಕ್ರಿಯರಾಗುವ ಮೂಲಕ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದಾರೆ. 
ಇಂದು (ದಿ.29-11-2018, ಗುರುವಾರ) ಸಂಜೆ ರೋಟರಿ ಕ್ಲಬ್ ತುಮಕೂರು ಸೆಂಟ್ರಲ್ ಗೆ ರೋಟರಿಯ ಜಿಲ್ಲಾ ಗೌರ್ನರ್ ರವರಾದ ಶ್ರೀ ಸುರೇಶ್ ಹರಿ ರವರು ಭೇಟಿ ನೀಡಿದ್ದರು. 
ಇದೇ ಸಂದರ್ಭದಲ್ಲಿ ಇತರ ಸಾಧಕರಾದ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ಶ್ರೀ ಜಿ.ಎಂ.ಸಿದ್ದೇಗೌಡರು ಅವರೊಂದಿಗೆ ನನ್ನನ್ನೂ (ಈ ವರ್ಷ ಪತ್ರಿಕಾ ಕ್ಷೇತ್ರದ ಪರವಾಗಿ ನನಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ) ಆಹ್ವಾನಿಸಿ "ಗೌರವ ಸಮರ್ಪಣಾ ಪತ್ರ" ನೀಡಿ ಪ್ರೀತಿಯಿಂದ ಸನ್ಮಾನಿಸಿದರು.
ರೋಟರಿ ಜಿಲ್ಲಾ ಗೌರ್ನರ್ ಶ್ರೀ ಸುರೇಶ್ ಹರಿ, ಜಿಲ್ಲಾ ಕಾರ್ಯದರ್ಶಿ ಶ್ರೀ ತಿರುಮುರುಗನ್, ಸಹಾಯಕ ಗೌರ್ನರ್ ಶ್ರೀ ಕೆ.ಟಿ.ಥಾಮಸ್, ತುಮಕೂರು ಸೆಂಟ್ರಲ್ ಅಧ್ಯಕ್ಷರಾದ ಶ್ರೀ ಎಂ.ಜಿ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಆರ್.ಎನ್.ದಿನಕರ್, ರೋಟೇರಿಯನ್ ಗಳಾದ ಶ್ರೀ ಬೆಳ್ಳಿ ಲೋಕೇಶ್, ಶ್ರೀ ಟಿ.ಆರ್.ಎಚ್.ಪ್ರಕಾಶ್, ಶ್ರೀ ಟಿ.ಬಿ.ಮೃತ್ಯುಂಜಯ, ಶ್ರೀ ಬಿಳಿಗೆರೆ ಶಿವಕುಮಾರ್, ಶ್ರೀ ಬಿ.ಎ.ಶಿವಕುಮಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ರೋಟರಿಯ ಎಲ್ಲ ಪದಾಧಿಕಾರಿಗಳು, ಸದಸ್ಯರುಗಳಿಗೆ ವಿಶೇಷವಾಗಿ ಶ್ರೀ ಬೆಳ್ಳಿ ಲೋಕೇಶ್ ಅವರಿಗೆ ಕೃತಜ್ಞತೆಗಳು....






Sunday, 25 November 2018

Durgaparameshwari Temple ದುರ್ಗಾಪರಮೇಶ್ವರಿ ದೇಗುಲ R S Iyer

ತುಮಕೂರು ಸನಿಹದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಇರುವ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಹಾಗೂ ಸ್ವಲ್ಪ ದೂರದ ಸುಗ್ಗನಹಳ್ಳಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾವು ಇಂದು (25-11-2018, ಭಾನುವಾರ) ಸಂಜೆ ಅನಿರೀಕ್ಷಿತವಾಗಿ ತೆರಳಿದ್ದಾಗ..









Friday, 23 November 2018

ರಾಜ್ಯೋತ್ಸವದಲ್ಲಿ ಸನ್ಮಾನ Felicitation to R S Iyer @ Rajyothsava programme 2018

ನಮ್ಮ ತುಮಕೂರಿನ ಮಾರುತಿ ನಗರದಲ್ಲಿ ''ಮಾರುತಿನಗರ ನಾಗರಿಕ ಹಿತರಕ್ಷಣಾ ಸಮಿತಿ'' ನಡೆಸಿದ ಕನ್ನಡ ರಾಜ್ಯೋತ್ಸವದ ಇಂದಿನ (22-11-2018, ಗುರುವಾರ, ಸಂಜೆ) ಸಮಾರಂಭದಲ್ಲಿ ನನ್ನನ್ನು ಪ್ರೀತಿಯಿಂದ ಸನ್ಮಾನಿಸಿದರು. ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು , ಸಾಹಿತಿಗಳಾದ ಶ್ರೀ ಕವಿತಾಕೃಷ್ಣ ರವರು, ಸಮಿತಿ ಅಧ್ಯಕ್ಷರಾದ ಶ್ರೀ ಸಿದ್ದರಾಮಯ್ಯ ರವರು, ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯರವರು, ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನರವರು, ಎನ್.ಎಸ್. ಐ ಫೌಂಡೇಷನ್ ನ ಶ್ರೀ ಎನ್.ಎನ್.ಶ್ರೀಧರ್ ಅವರೂ ಸೇರಿದಂತೆ ಅನೇಕ ಗಣ್ಯರುಗಳು ಉಪಸ್ಥಿತರಿದ್ದರು.





Tuesday, 20 November 2018

ಕೈದಾಳದ ಚೆನ್ನಕೇಶವ ದೇಗುಲದ ಶಿಲ್ಪ ವೈಭವ Part-2 Kaidala Temple

ಕೈದಾಳದ ಚೆನ್ನಕೇಶವ ದೇಗುಲದ ಶಿಲ್ಪ ವೈಭವ
********************************************
ಭಾಗ-2
ನಮ್ಮ ತುಮಕೂರು ಸಮೀಪದ ಕೈದಾಳ ಗ್ರಾಮದ ಶ್ರೀ ಚೆನ್ನಕೇಶವ ದೇವಾಲಯವು ಐತಿಹಾಸಿವಾಗಿ ಸುಪ್ರಸಿದ್ಧ. "ಅಮರಶಿಲ್ಪಿ" ಜಕಣಾಚಾರಿ ತೋರಿರುವ ಶಿಲ್ಪಕಲಾನೈಪುಣ್ಯತೆಯ ಚೆನ್ನಕೇಶವ ವಿಗ್ರಹ ಸುವಿಖ್ಯಾತವಾಗಿದೆ. ಈ ದೇಗುಲ ಪ್ರವೇಶದ ರಾಜಗೋಪುರದ ಕಂಬಗಳಲ್ಲಿ ಶಿಲ್ಪಕಲೆಯ ಬೆಡಗು ಹೃನ್ಮನ ಸೂರೆಗೊಳ್ಳುತ್ತದೆ. ದೇವಾಲಯದ ಗರ್ಭಗುಡಿಯಲ್ಲಿರುವ ಚೆನ್ನಕೇಶವನ ಪುಟ್ಟ ಪ್ರತಿರೂಪವೊಂದು ಇಲ್ಲಿನ ಕಂಬದಲ್ಲಿರುವುದು ಒಂದು ವಿಶೇಷ. ಇನ್ನು ಕಲ್ಲಿನ ಗೋಡೆಯಲ್ಲಿ ಕೋತಿಯ ಚಿತ್ರ ಕೆತ್ತಿರುವುದು ಅಚ್ಚರಿ ಮೂಡಿಸುತ್ತದೆ. ಇತ್ತೀಚೆಗೆ (ದಿ. 11-11-2018, ಭಾನುವಾರ) ನಾವು ಅಲ್ಲಿಗೆ ಭೇಟಿ ಕೊಟ್ಟಿದ್ದಾಗ ತೆಗೆದ ಭಾವಚಿತ್ರಗಳಿವು. ಭಾಗ-1 ರಲ್ಲಿ ದೇವಾಲಯದ ಒಳಭಾಗದ ಚಿತ್ರಗಳನ್ನು ಪ್ರಕಟಿಸಿರುವುದನ್ನು ನೆನಪಿಸಿಕೊಳ್ಳಬಹುದು.














Thursday, 15 November 2018

ಸ್ವಾಮಿ ಜಗದಾತ್ಮನಂದಜಿ ಪತ್ರ- Sri Swamy Jagadathmanandaji Letter to R S Iyer

ಬದುಕನ್ನು ಕಲಿಸುವ ಪರಿ ಇದೇ ಅಲ್ಲವೇ?
************************************
ಪೂಜ್ಯ ಸ್ವಾಮಿ ಜಗದಾತ್ಮಾನಂದಜಿಯವರನ್ನು ನಾವು ನೋಡಿದ್ದು "ಬದುಕಲು ಕಲಿಯಿರಿ" ಪುಸ್ತಕದ ಮೂಲಕ. ಆ ಪುಸ್ತಕವನ್ನು ಓದುತ್ತಲೇ ನಾವು ಬೆಳೆದವರು. ತುಮಕೂರಿನಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ಥಾಪಿತವಾದ ಬಳಿಕ, ಅವರು ಇಲ್ಲಿನ ಕಾರ್ಯಕ್ರಮಗಳಿಗೆ ಬಂದಾಗ ಅವರನ್ನು ನೋಡಿ, ಅವರ ಮಾತುಗಳನ್ನು ಆಲಿಸಿ ಧನ್ಯತಾಭಾವ ತಳೆದವರು ನಾವು. 
2002 ರಲ್ಲಿ ತುಮಕೂರಿನಲ್ಲಿ ಕಾರ್ಯಕ್ರಮ ನಡೆಯಿತು. ಪೂಜ್ಯರ ಉಪನ್ಯಾಸ ಇತ್ತು. ಅವರ ಉಪನ್ಯಾಸ ಉದ್ಬೋಧಕವಾಗಿತ್ತು. ಸಹಜವಾಗಿಯೇ ಅವರ ಮಾತುಗಳನ್ನು ಸವಿವರವಾಗಿ ವರದಿ ಮಾಡಿದ್ದೆ. ನಂತರದಲ್ಲಿ ಪತ್ರಿಕೆಯ ಪ್ರತಿಗಳನ್ನು ಅಂಚೆ ಮೂಲಕ ಅವರ ಅವಗಾಹನೆಗೆಂದು ಪೊನ್ನಂಪೇಟೆಯ ಆಶ್ರಮಕ್ಕೆ ಕಳಿಸಿದ್ದೆ.
ಪೂಜ್ಯ ಸ್ವಾಮೀಜಿಯವರು ಅದನ್ನು ಓದಿದ ಬಳಿಕ ನನಗೆ ಬರೆದಿರುವ ಪತ್ರವಿದು. ಪತ್ರ ಓದಿದೆ. ನನ್ನ ಸಣ್ಣದೊಂದು ಕರ್ತವ್ಯ ನಿರ್ವಹಣೆಗೆ ಅವರು ಅಸೀಮ ಔದಾರ್ಯದಿಂದ, ಅಂತಃಕರಣದಿಂದ, ಹೃತ್ಪೂರ್ವಕವಾಗಿ ಹರಸಿದ್ದುದನ್ನು ಕಂಡು ನನ್ನ ಹೃದಯ ತುಂಬಿ ಬಂದಿತ್ತು. ಇದಕ್ಕಿಂತ ಮಿಗಿಲಾದ ಗೌರವ-ಪ್ರಶಸ್ತಿ ಇನ್ನೇನಿದೆ ಎಂದು ಭಾವಿಸಿ, ಇದನ್ನು ನನ್ನ ಸಂಗ್ರಹದಲ್ಲಿ ಜೋಪಾನವಾಗಿ ಇರಿಸಿದ್ದೆ. ಇಂದು ಇದೇ ಮೊದಲಬಾರಿಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಪೂಜ್ಯರು ಇಂದು- (15-11-2018 ಗುರವಾರ) ಈಗ ಭೌತಿಕವಾಗಿ ನಮ್ಮೊಡನಿಲ್ಲ. ಆದರೆ ಅವರ ಇಂಥ ಅಂತಃಕರಣದ ಮಾತುಗಳು ಸದಾ ಅನುರಣಿತಗೊಳ್ಳುತ್ತಲೇ ಇರುತ್ತವೆ.
ಬದುಕನ್ನು ಕಲಿಸುವ ಪರಿ ಇದೇ ಇರಬಹುದಲ್ಲವೇ?

H.H.Sri Swamy Jagadathmanandaji letter to R.S.Iyer






Tuesday, 13 November 2018

ಶ್ರೀ ಕರಾಟೆ ಕೃಷ್ಣಮೂರ್ತಿರವರು ಅಭಿನಂದಿಸಿದಾಗ... Sri Karate Krishna Murthy - R.S. Iyer

ಇಂಥ ನಿರ್ಮಲ ಪ್ರಸಂಗಗಳೇ ಚೈತನ್ಯ ತರುವಂಥವು..
******************************************
ಈ ಚಿತ್ರದಲ್ಲಿ ನನ್ನೊಡನೆ ಇರುವವರು ಶ್ರೀ ಕೃಷ್ಣಮೂರ್ತಿರವರು. ತುಮಕೂರಿನಲ್ಲಿ "ಕರಾಟೆ ಕೃಷ್ಣಮೂರ್ತಿ'' ಎಂದೇ ಖ್ಯಾತಿ ಪಡೆದಿರುವವರು. ಕಳೆದ 38 ವರ್ಷಗಳಿಂದಲೂ ಇವರು ಕರಾಟೆ ಪಟುವಾಗಿ, ಕರಾಟೆ ಶಿಕ್ಷಕರಾಗಿ ಹೆಸರು ಗಳಿಸಿರುವವರು. ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ಕಲಿಸಿರುವವರು ಹಾಗೂ ಈಗಲೂ ಕಲಿಸುತ್ತಿರುವವರು. ಕರಾಟೆಯಲ್ಲಿನ ಇವರ ಸಾಧನೆಗಳು ಗಮನಸೆಳೆಯುವಂಥವು. ಚಿಕ್ಕಪೇಟೆಯ ಹರಿಸಿಂಗರ ಬೀದಿಯ ನಿವಾಸಿಗಳು. ಸುಮಾರು 30 ವರ್ಷಗಳಿಂದಲೂ ಇವರು ನನಗೆ ಸುಪರಿಚಿತರು. ತುಂಬ ಸಂಕೋಚದ ಸ್ವಭಾವದವರು. ಇವರ ಸಜ್ಜನಿಕೆ, ಸಂಭಾವಿತತನವನ್ನು ಚೆನ್ನಾಗಿ ಬಲ್ಲೆ. ಇಂದು (13-11-2018, ಮಂಗಳವಾರ) ಬೆಳಗ್ಗೆ ಅನಿರೀಕ್ಷಿತವಾಗಿ ಕರೆ ಮಾಡಿದ ಇವರು, ನಮ್ಮ ಮನೆಗೆ ಬರುತ್ತಿರುವುದಾಗಿ ತಿಳಿಸಿದರು. ಬನ್ನಿ ಎಂದೆ. ತಮ್ಮ ಮಗ ಸಾಗರ್ ಜೊತೆ ಬಂದರು. ನನಗೆ ಅಚ್ಚರಿ ಕಾದಿತ್ತು. ಈ ಬಾರಿಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನನಗೆ ಸಂದ ಸಂತಸಕ್ಕಾಗಿ ನಮ್ಮ ಮನೆಗೇ ಬಂದು ಪ್ರೀತಿಯಿಂದ ಗೌರವಾರ್ಪಣೆ ಮಾಡಿದರು. ನಾನಂತೂ ಮೂಕನಾದೆ. ಇಂಥ ನಿರ್ಮಲವಾದ ಪ್ರಸಂಗಗಳೇ ಚೈತನ್ಯ ಮೂಡಿಸುವಂಥವು ಅನ್ನಿಸಿತು.









Sunday, 11 November 2018

ಕೈದಾಳದ ಚೆನ್ನಕೇಶವ ದೇಗುಲ-Part 1- Kaidala Chennakeshava Temple - R S Iyer

ಕೈದಾಳದ ಚೆನ್ನಕೇಶವ ದೇಗುಲ- ನಮ್ಮೂರ ಹಿರಿಮೆ
*************************************************
ಭಾಗ-1
ತುಮಕೂರು ನಗರಕ್ಕೆ ಸನಿಹದ ಗೂಳೂರಿನ ಪಕ್ಕದಲ್ಲೇ ಇರುವ "ಕೈದಾಳ" ಗ್ರಾಮದ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯವು ತುಮಕೂರು ನಗರಕ್ಕೊಂದು ಹಿರಿಮೆ. ಅಮರಶಿಲ್ಪಿ ಜಕಣಾಚಾರಿಯ ಹುಟ್ಟೂರು ಎಂಬ ಖ್ಯಾತಿಯ ಜೊತೆಗೆ ಆತನ ಶಿಲ್ಪವಿದ್ಯಾ ಪ್ರಾವೀಣ್ಯತೆಯ ಪ್ರತೀಕವಾಗಿ ಆತನಿಂದಲೇ ಶ್ರೀ ಚೆನ್ನಕೇಶವ ಸ್ವಾಮಿಯ ವಿಗ್ರಹ ಕೆತ್ತಲ್ಪಟ್ಟಿರುವುದು ಇಲ್ಲಿನ ವಿಶೇಷ. ವಿಗ್ರಹದ ಕೆತ್ತನೆಯಲ್ಲಿರುವ ಅತಿಸೂಕ್ಷ್ಮ ವೈಶಿಷ್ಟ್ಯಗಳು ನಮ್ಮನ್ನು ರೋಮಾಂಚನಗೊಳಿಸುತ್ತದೆ. ಇಂದು (ದಿ. 11-11-2018, ಭಾನುವಾರ) ಬೆಳಗ್ಗೆ ಅಲ್ಲಿಗೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರಿ ವಿ.ಎಸ್.ರಾಮಚಂದ್ರನ್ ಹಾಗೂ ಮಿತ್ರರಾದ ಶ್ರೀ ಬಿ.ಎಸ್.ವೆಂಕಟೇಶ್ ಭೇಟಿ ಕೊಟ್ಟಿದ್ದೆವು. ಅರ್ಚಕರಾದ ಶ್ರೀ ಪಾರ್ಥಸಾರಥಿಯವರು ಪೂಜಾದಿಗಳಿಗೆ ಸಿದ್ಧತೆಗಳನ್ನು ನಡೆಸುತ್ತಿದ್ದರು. ಅಭಿಷೇಕಕ್ಕೆ ಸಿದ್ಧತೆಗಳಾಗುತ್ತಿದ್ದುದರಿಂದ ಯಾವುದೇ ಬಾಹ್ಯ ಅಲಂಕಾರಗಳಿಲ್ಲದಿದ್ದ, ಮೂಲ ವಿಗ್ರಹದ ಶಿಲ್ಪಕಲಾ ಸೌಂದರ್ಯವನ್ನು ನೋಡುವ ಸುಯೋಗ ನಮ್ಮದಾಯಿತು. @ Kaidala Sri Chennakeshava Temple - Sri V S Ramachandran, R S Iyer & R Vishwanathan


















ಗೂಳೂರು ಗಣಪ - ನಮ್ಮೂರ ಹೆಮ್ಮೆ Guluru Ganapathi 2018 R.S.Iyer

ಗೂಳೂರು ಗಣಪ - ನಮ್ಮೂರ ಹೆಮ್ಮೆ
*********************************
ತುಮಕೂರು ನಗರಕ್ಕೆ ಹೊಂದಿಕೊಂಡಂತೆಯೇ ಇರುವ ಪುಟ್ಟ ಗ್ರಾಮ ಗೂಳೂರಿನ ಶ್ರೀ ಗಣಪತಿಯು ನಮ್ಮ ತುಮಕೂರಿನ ಒಂದು ಹೆಮ್ಮೆ. ಬೃಹತ್ ಆಕಾರದಿಂದಲೇ ಈ ಗಣಪತಿಯು ಸುವಿಖ್ಯಾತವಾಗಿದೆ.12 ಅಡಿ ಎತ್ತರ 8 ಅಡಿ ಅಗಲದ ಈ ಗಣಪನನ್ನು ನೋಡುವುದೇ ಚೆನ್ನ. ದೀಪಾವಳಿ ಬಳಿಕ ಸುಮಾರು ಒಂದು ತಿಂಗಳ ಕಾಲ ಈ ಗಣಪತಿಯ ಉತ್ಸವ ಇರುತ್ತದೆ. ಈಗ ದೇಗುಲ ಜೀರ್ಣೋದ್ಧಾರಗೊಂಡು ಆಕರ್ಷಕವಾಗಿದೆ. ನಾವೆಲ್ಲ ಬಾಲ್ಯದಲ್ಲಿ ಗೂಳೂರಿಗೆ ಹೋಗಿ ಗಣಪತಿಯನ್ನು ಕಾಣುವುದೆಂದರೆ ಅದೊಂದು ಸಂಭ್ರಮವೋ ಸಂಭ್ರಮವಾಗುತ್ತಿತ್ತು. ಇಂದು (ದಿ. 11-11-2018, ಭಾನುವಾರ) ಬೆಳಗ್ಗೆ ನಾನು, ವಿಶ್ವನಾಥನ್ R. Vishwanathan Tumkur, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅಲ್ಲಿಗೆ ತೆರಳಿ ಗಣಪತಿಯ ಮುಂದೆ ನಿಂತಾಗ ಅವೆಲ್ಲ ನೆನಪಿಗೆ ಬಂದವು.ಗೂಳೂರು ಬದಲಾಗಿದೆ-ಬದಲಾಗುತ್ತಿದೆ. ಆದರೆ ನಮ್ಮ ಗಣಪತಿ ಮಾತ್ರ ಹಾಗೆಯೇ ಇದೆ. ಅದೇ ಆಕರ್ಷಣೆ ಉಳಿದುಕೊಂಡಿದೆ. ಇಂದು ನಮ್ಮೊಡನೆ ಮಿತ್ರರಾದ ಶ್ರೀ ಬಿ.ಎಸ್.ವೆಂಕಟೇಶ್ ಸಹ ಇದ್ದರು.











Wednesday, 7 November 2018

ಮೇಲುಕೋಟೆಯ ದೇಗುಲದಲ್ಲಿ..@ Melukote Sri Cheluvanarayan swamy Temple...

ಮೇಲುಕೋಟೆಯ ದೇಗುಲದಲ್ಲಿ..
****************************
ಮೇಲುಕೋಟೆಯ ವಿಖ್ಯಾತ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದ ದಿವ್ಯ ಸನ್ನಿಧಿಯಲ್ಲಿ ದಿ. 04-11-2018, ಭಾನುವಾರ ಸಂಜೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್.. ನಮ್ಮ ಜೊತೆ ಮಿತ್ರರಾದ ಶ್ರೀ ಜಿ.ಕೆ.ಶ್ರೀನಿವಾಸ್ ಮತ್ತು ಶ್ರೀ ಬಿ.ಎಸ್.ವೆಂಕಟೇಶ್ ಸಹ ಇದ್ದರು.. @ Melukote Sri Cheluvanarayan swamy Temple... Sri V.S.Ramachandran, R.S.Iyer and R Vishwanathan