* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday, 15 November 2018

ಸ್ವಾಮಿ ಜಗದಾತ್ಮನಂದಜಿ ಪತ್ರ- Sri Swamy Jagadathmanandaji Letter to R S Iyer

ಬದುಕನ್ನು ಕಲಿಸುವ ಪರಿ ಇದೇ ಅಲ್ಲವೇ?
************************************
ಪೂಜ್ಯ ಸ್ವಾಮಿ ಜಗದಾತ್ಮಾನಂದಜಿಯವರನ್ನು ನಾವು ನೋಡಿದ್ದು "ಬದುಕಲು ಕಲಿಯಿರಿ" ಪುಸ್ತಕದ ಮೂಲಕ. ಆ ಪುಸ್ತಕವನ್ನು ಓದುತ್ತಲೇ ನಾವು ಬೆಳೆದವರು. ತುಮಕೂರಿನಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ಥಾಪಿತವಾದ ಬಳಿಕ, ಅವರು ಇಲ್ಲಿನ ಕಾರ್ಯಕ್ರಮಗಳಿಗೆ ಬಂದಾಗ ಅವರನ್ನು ನೋಡಿ, ಅವರ ಮಾತುಗಳನ್ನು ಆಲಿಸಿ ಧನ್ಯತಾಭಾವ ತಳೆದವರು ನಾವು. 
2002 ರಲ್ಲಿ ತುಮಕೂರಿನಲ್ಲಿ ಕಾರ್ಯಕ್ರಮ ನಡೆಯಿತು. ಪೂಜ್ಯರ ಉಪನ್ಯಾಸ ಇತ್ತು. ಅವರ ಉಪನ್ಯಾಸ ಉದ್ಬೋಧಕವಾಗಿತ್ತು. ಸಹಜವಾಗಿಯೇ ಅವರ ಮಾತುಗಳನ್ನು ಸವಿವರವಾಗಿ ವರದಿ ಮಾಡಿದ್ದೆ. ನಂತರದಲ್ಲಿ ಪತ್ರಿಕೆಯ ಪ್ರತಿಗಳನ್ನು ಅಂಚೆ ಮೂಲಕ ಅವರ ಅವಗಾಹನೆಗೆಂದು ಪೊನ್ನಂಪೇಟೆಯ ಆಶ್ರಮಕ್ಕೆ ಕಳಿಸಿದ್ದೆ.
ಪೂಜ್ಯ ಸ್ವಾಮೀಜಿಯವರು ಅದನ್ನು ಓದಿದ ಬಳಿಕ ನನಗೆ ಬರೆದಿರುವ ಪತ್ರವಿದು. ಪತ್ರ ಓದಿದೆ. ನನ್ನ ಸಣ್ಣದೊಂದು ಕರ್ತವ್ಯ ನಿರ್ವಹಣೆಗೆ ಅವರು ಅಸೀಮ ಔದಾರ್ಯದಿಂದ, ಅಂತಃಕರಣದಿಂದ, ಹೃತ್ಪೂರ್ವಕವಾಗಿ ಹರಸಿದ್ದುದನ್ನು ಕಂಡು ನನ್ನ ಹೃದಯ ತುಂಬಿ ಬಂದಿತ್ತು. ಇದಕ್ಕಿಂತ ಮಿಗಿಲಾದ ಗೌರವ-ಪ್ರಶಸ್ತಿ ಇನ್ನೇನಿದೆ ಎಂದು ಭಾವಿಸಿ, ಇದನ್ನು ನನ್ನ ಸಂಗ್ರಹದಲ್ಲಿ ಜೋಪಾನವಾಗಿ ಇರಿಸಿದ್ದೆ. ಇಂದು ಇದೇ ಮೊದಲಬಾರಿಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಪೂಜ್ಯರು ಇಂದು- (15-11-2018 ಗುರವಾರ) ಈಗ ಭೌತಿಕವಾಗಿ ನಮ್ಮೊಡನಿಲ್ಲ. ಆದರೆ ಅವರ ಇಂಥ ಅಂತಃಕರಣದ ಮಾತುಗಳು ಸದಾ ಅನುರಣಿತಗೊಳ್ಳುತ್ತಲೇ ಇರುತ್ತವೆ.
ಬದುಕನ್ನು ಕಲಿಸುವ ಪರಿ ಇದೇ ಇರಬಹುದಲ್ಲವೇ?

H.H.Sri Swamy Jagadathmanandaji letter to R.S.Iyer






No comments:

Post a Comment