* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday, 11 November 2018

ಕೈದಾಳದ ಚೆನ್ನಕೇಶವ ದೇಗುಲ-Part 1- Kaidala Chennakeshava Temple - R S Iyer

ಕೈದಾಳದ ಚೆನ್ನಕೇಶವ ದೇಗುಲ- ನಮ್ಮೂರ ಹಿರಿಮೆ
*************************************************
ಭಾಗ-1
ತುಮಕೂರು ನಗರಕ್ಕೆ ಸನಿಹದ ಗೂಳೂರಿನ ಪಕ್ಕದಲ್ಲೇ ಇರುವ "ಕೈದಾಳ" ಗ್ರಾಮದ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯವು ತುಮಕೂರು ನಗರಕ್ಕೊಂದು ಹಿರಿಮೆ. ಅಮರಶಿಲ್ಪಿ ಜಕಣಾಚಾರಿಯ ಹುಟ್ಟೂರು ಎಂಬ ಖ್ಯಾತಿಯ ಜೊತೆಗೆ ಆತನ ಶಿಲ್ಪವಿದ್ಯಾ ಪ್ರಾವೀಣ್ಯತೆಯ ಪ್ರತೀಕವಾಗಿ ಆತನಿಂದಲೇ ಶ್ರೀ ಚೆನ್ನಕೇಶವ ಸ್ವಾಮಿಯ ವಿಗ್ರಹ ಕೆತ್ತಲ್ಪಟ್ಟಿರುವುದು ಇಲ್ಲಿನ ವಿಶೇಷ. ವಿಗ್ರಹದ ಕೆತ್ತನೆಯಲ್ಲಿರುವ ಅತಿಸೂಕ್ಷ್ಮ ವೈಶಿಷ್ಟ್ಯಗಳು ನಮ್ಮನ್ನು ರೋಮಾಂಚನಗೊಳಿಸುತ್ತದೆ. ಇಂದು (ದಿ. 11-11-2018, ಭಾನುವಾರ) ಬೆಳಗ್ಗೆ ಅಲ್ಲಿಗೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರಿ ವಿ.ಎಸ್.ರಾಮಚಂದ್ರನ್ ಹಾಗೂ ಮಿತ್ರರಾದ ಶ್ರೀ ಬಿ.ಎಸ್.ವೆಂಕಟೇಶ್ ಭೇಟಿ ಕೊಟ್ಟಿದ್ದೆವು. ಅರ್ಚಕರಾದ ಶ್ರೀ ಪಾರ್ಥಸಾರಥಿಯವರು ಪೂಜಾದಿಗಳಿಗೆ ಸಿದ್ಧತೆಗಳನ್ನು ನಡೆಸುತ್ತಿದ್ದರು. ಅಭಿಷೇಕಕ್ಕೆ ಸಿದ್ಧತೆಗಳಾಗುತ್ತಿದ್ದುದರಿಂದ ಯಾವುದೇ ಬಾಹ್ಯ ಅಲಂಕಾರಗಳಿಲ್ಲದಿದ್ದ, ಮೂಲ ವಿಗ್ರಹದ ಶಿಲ್ಪಕಲಾ ಸೌಂದರ್ಯವನ್ನು ನೋಡುವ ಸುಯೋಗ ನಮ್ಮದಾಯಿತು. @ Kaidala Sri Chennakeshava Temple - Sri V S Ramachandran, R S Iyer & R Vishwanathan


















No comments:

Post a Comment