* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 5 November 2018

ತೊಣ್ಣೂರು ಕೆರೆ Tonnur Kere, Mandya 04-11-2018


"ತೊಣ್ಣೂರು ಕೆರೆ"ಯ ವಿಹಂಗಮ ನೋಟ..
****************************************
"ತೊಣ್ಣೂರು ಕೆರೆ"ಯ ವಿಹಂಗಮ ನೋಟವೇ ಒಂದು ಸೊಬಗು. ಮಂಡ್ಯ ಜಿಲ್ಲೆ ಮೇಲುಕೋಟೆ ಸನಿಹದಲ್ಲಿರುವ, ಒಟ್ಟು 2150 ಎಕರೆ ವಿಸ್ತ್ರೀರ್ಣದಲ್ಲಿ ಪಸರಿಸಿರುವ ಈ ಅದ್ಭುತವಾದ ಕೆರೆಯನ್ನು ಶ್ರೀ ರಾಮಾನುಜಾಚಾರ್ಯರು 1000 ವರ್ಷಗಳ ಹಿಂದೆ ನಿರ್ಮಿಸಿರುವರೆಂಬುದು ಇಲ್ಲಿನ ಇತಿಹಾಸ. "ತಿರುಮಲ ಸಾಗರ'' ಎಂದು ಶ್ರೀ ರಾಮಾನುಜಾಚಾರ್ಯರು ಇದಕ್ಕೆ ನಾಮಕರಣ ಮಾಡಿದ್ದರೆಂಬ ಮಾಹಿತಿಯೂ ಇದೆ. "ಕೆರೆ ತೊಂಡನೂರು'' ಎಂಬ ಹೆಸರೂ ಇದಕ್ಕಿದೆ. ಇದೊಂದು ಜನಾಕರ್ಷಣೆಯ ಕೇಂದ್ರವೂ ಆಗಿದ್ದು, ಪ್ರತಿನಿತ್ಯ - ವಿಶೇಷವಾಗಿ ವಾರಾಂತ್ಯಗಳಲ್ಲಿ ಹಾಗೂ ರಜಾದಿನಗಳಲ್ಲಿ ಸಹಸ್ರಾರು ಜನರು ಇಲ್ಲಿಗೆ ಬಂದು ಆನಂದಿಸುತ್ತಾರೆ.ಭಾನುವಾರ (ದಿ. 04-11-2018) ಸಂಜೆ ನಾನು, ವಿಶ್ವನಾಥನ್, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಹಾಗೂ ಮಿತ್ರರಾದ ಶ್ರೀ ಜಿ.ಕೆ.ಶ್ರೀನಿವಾಸ್ ಮತ್ತು ಶ್ರೀ ಬಿ.ಎಸ್.ವೆಂಕಟೇಶ್ ಅಲ್ಲಿಗೆ ಭೇಟಿ ಕೊಟ್ಟು ಆಹ್ಲಾದಕರ ಪರಿಸರವನ್ನು ಆಸ್ವಾದಿಸಿದೆವು.
Tonnur Kere. This amazing historical lake is spread over an area of 2,150 acres. Tonnur Kere was planned and built by the srivaishnava Saint Ramanujacharya 1,000 years ago and was named by him as “Tirumalasagara”. ... Tonnur Kere also known as Kere Tondanur and is situtated in Mandya district, Srirangapatna taluk.









No comments:

Post a Comment