ಮೇಲುಕೋಟೆಯ ಪು.ತಿ.ನ. ನಿವಾಸ
--------------------------------
ಮೇಲುಕೋಟೆಗೆ ಹೋದ ಮೇಲೆ ನಾಡಿನ ಹೆಮ್ಮೆಯ ಕವಿ ಪು.ತಿ.ನರಸಿಂಹಾಚಾರ್ (ಪು.ತಿ.ನ.) ಅವರ ನಿವಾಸಕ್ಕೆ ಭೇಟಿ ಕೊಡದಿರಲಾದೀತೇ?
ಪ್ರತಿ ಬಾರಿ ಹೋದಾಗಲೂ ಈ ನಿವಾಸಕ್ಕೊಂದು ಭೇಟಿ ಕೊಡುವುದು ನಮ್ಮ ಅಭ್ಯಾಸ. ಅದೇ ರೀತಿ ಈ ಬಾರಿಯೂ ಭೇಟಿ ಕೊಟ್ಟೆವು. ಕವಿಯ ನೆನಪು ಮನದಲ್ಲಿ ಸಂತಸ ಮೂಡಿಸಿತು. (11-12-2020)
ಪರಮ ಸಾತ್ವಿಕ ವ್ಯಕ್ತಿತ್ವದ ಮೇರು ಕವಿ ಪು.ತಿ.ನ. ಅವರ ಈ ಪುರಾತನ ನಿವಾಸವೇ ಸಾತ್ವಿಕತೆಯ ಪ್ರತೀಕದಂತೆ ಭಾಸವಾಗುತ್ತದೆ. ಪು.ತಿ.ನ. ಅವರ ಕೃತಿಗಳು, ವಿವಿಧ ಭಾವಚಿತ್ರಗಳು, ಪ್ರಶಸ್ತಿ ಫಲಕಗಳು ಅಲ್ಲಿದ್ದು, ಕವಿಯ ಸ್ಮೃತಿಯನ್ನು ಜೀವಂತವಾಗಿರಿಸಿವೆ. ಪ್ರಶಾಂತ ವಾತಾವರಣದ ಮೇಲುಕೋಟೆಯ ದೇಗುಲದ ಸನಿಹದಲ್ಲೇ ರಸ್ತೆ ತಿರುವಿನಲ್ಲಿರುವ ಈ ಪುಟಾಣಿ- ಆದರೆ ಅಚ್ಚುಕಟ್ಟಾದ- ಮನೆಯನ್ನು ಜತನದಿಂದ ಸಂರಕ್ಷಿಸಿರುವುದು ಪ್ರಶಂಸನೀಯವಾದ ವಿಚಾರ.
No comments:
Post a Comment