ಶ್ರೀ ನಿಮಿಷಾಂಬ ದೇವಿಯ ದಿವ್ಯ ಸನ್ನಿಧಿಯಲ್ಲಿ
----------------------------------------
ಶ್ರೀರಂಗಪಟ್ಟಣದ ಕಾವೇರಿ ನದಿ ದಡದಲ್ಲಿರುವ ಶ್ರೀ ನಿಮಿಷಾಂಬ ದೇವಿಯ ದೇಗುಲ ಅತ್ಯಂತ ಪ್ರಸಿದ್ಧವಾದುದು. ಲಕ್ಷಾಂತರ ಭಕ್ತರ ಆರಾಧನಾ ಕ್ಷೇತ್ರ. ನಾವು ಭೇಟಿ ಕೊಟ್ಟಾಗ ದೇವಾಲಯ ತುಂಬ ಪ್ರಶಾಂತವಾಗಿತ್ತು. ದೇವರ ದರ್ಶನ ತೃಪ್ತಿಕರವಾಗಿ, ಸುಲಲಿತವಾಗಿ ಆಯಿತು.
ಬಳಿಕ ಪಕ್ಕದ ಕಾವೇರಿ ನದಿಯ ದಡದಲ್ಲಿ ಕುಳಿತಾಗ ಆ ಸುಂದರ ಪ್ರಾಕೃತಿಕ ವಾತಾವರಣ ನಮ್ಮನ್ನು ನಾವೇ ಮರೆಯುವಂತೆ ಮಾಡಿಬಿಟ್ಟಿತು. ಹರಿವ ನದಿಯ ನೀರನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಜೊತೆಗೆ ಅಲ್ಲಿಗೆ ಬಂದಿದ್ದ ಭಕ್ತರು, ಜನರು ನೀರಿನಲ್ಲಿ ಈಜುತ್ತ, ಕುಣಿದು ಕುಪ್ಪಳಿಸುತ್ತ ಮೈಮರೆಯುತ್ತಿದ್ದರು. ಅದರಲ್ಲೂ ಪುಟ್ಟ ಕಂದಮ್ಮಗಳನ್ನು ನೀರಿಗಿಳಿಸಿ ಪೋಷಕರು ಆನಂದಿಸುತ್ತಿದ್ದ ಪರಿ, ಅದಕ್ಕಿಂತ ಮಿಗಿಲಾಗಿ ಆ ಕೈಕೂಸುಗಳು ನೀರಿನಲ್ಲಿ ಆಟವಾಡುತ್ತ ಖುಷಿಪಡುತ್ತಿದ್ದುದನ್ನು ನೋಡುವಾಗ ನಾವೂ ಒಂದಷ್ಟು ಹೊತ್ತು ಅಕ್ಷರಶಃ ಮೈಮರೆತು ಆನಂದಿಸಿದೆವು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು, ವಿಶ್ವನಾಥನ್, ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್, ಆಕೆಯ ಪುತ್ರಿ ಕು. ನಮಿತ ಇದ್ದೇವೆ.
No comments:
Post a Comment