* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 8 January 2021

Melukote Temple- ಮೇಲುಕೋಟೆ ದೇವಾಲಯ- 11-12-2020 - R S Iyer

 ಮೇಲುಕೋಟೆಯ ದೇಗುಲದಲ್ಲಿ

************************

ಮಂಡ್ಯ ಜಿಲ್ಲೆಯ ಸುವಿಖ್ಯಾತ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿಯ ದಿವ್ಯ ಸನ್ನಿಧಿ ತುಂಬ ಪ್ರಶಾಂತವಾಗಿತ್ತು. ಕೆಲ ಹೊತ್ತು ದೇವರ ಸಮ್ಮುಖ ಕುಳಿತದ್ದು ಅನಿರ್ವಚನೀಯ ಅನುಭವ. (ದಿನಾಂಕ 11-12-2020, ಶುಕ್ರವಾರ).
ದೇವಾಲಯದ ಬಳಿಕ ಪಕ್ಕದ ಕಲ್ಯಾಣಿಗೆ ಭೇಟಿ. ಅನೇಕ ಭಕ್ತರ ಕುಟುಂಬಗಳು ಕಲ್ಯಾಣಿಯ ನೀರಿಗೆ ವಿವಿಧ ಪೂಜೆಗಳನ್ನು ನೆರವೇರಿಸುತ್ತಿದ್ದರು. ಕಲ್ಯಾಣಿಯ ನೀರಿನಲ್ಲಿರುವ ಮೀನುಗಳು ಹಿಂಡು-ಹಿಂಡಾಗಿ ದಡಕ್ಕೆ ಧಾವಿಸಿಬರುವುದನ್ನು ನೋಡುವುದೇ ಮನೋಹರ. ಇನ್ನು ಆ ಕಲ್ಯಾಣಿಯ ಭವ್ಯತೆ, ಸುತ್ತಲಿನ ಕಲ್ಲು ಕಟ್ಟಡಗಳ ಆಕರ್ಷಣೆ ಅಲ್ಲಿ ಹೊತ್ತು ಹೋಗುವುದನ್ನೇ ಮರೆಸಿಬಿಡುತ್ತದೆ.

ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು, ವಿಶ್ವನಾಥನ್, ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್, ಆಕೆಯ ಪುತ್ರಿ ಕು. ನಮಿತ  ಇದ್ದೇವೆ.











No comments:

Post a Comment